ಎಸ್ ಎಲ್ ವಿ ಸಿನಿಮಾ ಅಡಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾ ಶಾಲಿನಿ. ಸಾಮಾಜಿಕ ಕಳಕಳಿಯೊಂದಿಗೆ ಹಾರರ್ ಮತ್ತು ಮನರಂಜನೆ ಬೆರೆಸಿರುವ ಈ ಚಿತ್ರ ಅತ್ಯಾಚಾರದಂಥ ಘೋರ ಪಾತಕಗಳನ್ನೆಸಗುವವರ ವಿರುದ್ಧದ ಕಥೆಯಾಗಿದೆ. ಈ ಚಿತ್ರದ ನಿರ್ಮಾಪಕರು ಕೆ ಶ್ರೀನಿವಾಸ್ ಪ್ಲಾಸ್ಟರ್ ಆಫ್ ಪ್ಯಾರಿಸ್ ಉದಮದಿಂದ ಸಿನಿಮಾಕ್ಕೆ ಬಂದಿದ್ದಾರೆ.
ಅತ್ಯಾಚಾರವೆಸಗಿದ ನೀಚರು ನ್ಯಾಯಾಲಯದಿಂದ ಮುಕ್ತಿ ಪಡೆದು ಶಿಕ್ಷೆಯಿಂದ ಪಾರಾಗಬಹುದು. ಆದರೆ ‘ಶಾಲಿನಿ’ಯಿಂದ ತಪ್ಪಿಸಿಕೊಳ್ಳುವುದು ಮಾತ್ರ ಅಸಾಧ್ಯ. ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರೆಂಟಿ. ಇದು ಶಾಲಿನಿ ಚಿತ್ರದ ಮುಖ್ಯ ಅಂಶ.
‘ಶಾಲಿನಿ’ ಮಲ್ಲಿಕಾರ್ಜುನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಪುನೀತ್, ಅರವಿಂದ್, ಸಂತೋಷ್, ಅನ್ವಿತ, ಪ್ರೇಮ, ಕಾವ್ಯ, ಶೋಭರಾಜ್, ಮನದೀಪ್ ರಾಯ್, ಅಪೂರ್ವ, ಕಿಲ್ಲರ್ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ಯಾಮ್ ಸಿಂಧೂರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಧುರ ಅವರ ಸಂಗೀತವಿದೆ. ಶಿವ ಪ್ರಸಾದ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ಇದೆ.